ಅಧ್ಯಾಯ 1


ಪೀಠಿಕೆ

1ಸನ್ಮಾನ್ಯ ಥಿಯೋಫಿಲನೇ,
ನಮ್ಮ ನಡುವೆ ನಡೆದುಹೋದ ಘಟನೆಗಳ ವರದಿಗಳನ್ನು ಬರೆದಿಡುವ ಪ್ರಯತ್ನವನ್ನು ಹಲವರು ಮಾಡಿದ್ದಾರೆ. 2ಇಲ್ಲಿರುವ ಘಟನೆಗಳು, ಪ್ರಾರಂಭದಿಂದಲೂ ಕಣ್ಣಾರೆ ಕಂಡು ಶುಭಸಂದೇಶವನ್ನು ಸಾರಿದವರಿಂದಲೇ ನಾವು ತಿಳಿದುಕೊಂಡಂತಹ ವಿವರಗಳು. 3ಅವೆಲ್ಲವನ್ನೂ ಆಮೂಲಾಗ್ರವಾಗಿ ವಿಚಾರಿಸಿ ತಿಳಿದ ನಾನು ಅವುಗಳನ್ನು ನಿನಗೋಸ್ಕರ ಕ್ರಮಬದ್ಧವಾಗಿ ಬರೆಯುವುದು ಉಚಿತವೆಂದು ನನಗೂ ತೋರಿತು. 4ಇಲ್ಲಿ ನಿನಗೆ ಉಪದೇಶಿಸಲಾಗಿರುವ ವಿಷಯಗಳು ಸತ್ಯವಾದುವೆಂಬುದು ಇದರಿಂದ ನಿನಗೂ ಮನದಟ್ಟಾಗಬಹುದು.

ಸ್ನಾನಿಕ ಯೊವಾನ್ನ

5ಜುದೇಯ ಪ್ರಾಂತ್ಯದ ಅರಸನಾದ  ಹೆರೋದನ  ಕಾಲದಲ್ಲಿ  ಅಬೀಯನ  ವರ್ಗಕ್ಕೆ  ಸೇರಿದ  ಜಕರಿಯನೆಂಬ  ಒಬ್ಬ  ಯಾಜಕನಿದ್ದನು.  ಅವನ ಪತ್ನಿಯು ಆರೋನನ ಯಾಜಕ ವಂಶಕ್ಕೆ ಸೇರಿದವಳಾಗಿದ್ದಳು. ಆಕೆಯ ಹೆಸರು ಎಲಿಜಬೇತ್‌. 6ಅವರಿಬ್ಬರೂ ದೇವರ ದೃಷ್ಟಿಯಲ್ಲಿ ಭಯಭಕ್ತಿಯುಳ್ಳವರೂ, ನೀತಿವಂತರೂ ಆಗಿದ್ದರು. 7ಎಲಿಜಬೇತಳು ಬಂಜೆಯಾದುದರಿಂದ ಅವಳಿಗೆ ಮಕ್ಕರಲಿಲ್ಲ. ಅವರಿಬ್ಬರೂ ಮುದುಕರಾಗಿದ್ದರು.
8ಜಕರಿಯನು ತನ್ನ ವರ್ಗದ ಸರದಿಯಂತೆ ದೇವರ ಸನ್ನಿಧಿಯಲ್ಲಿ ಯಾಜಕವಿಧಿಯನ್ನು ನೆರವೇರಿಸುತ್ತಿದ್ದನು. 9ಒಮ್ಮೆ ಪದ್ಧತಿಯ  ಪ್ರಕಾರ ಚೀಟು ಹಾಕಿದಾಗ ಧೂಪಾರತಿಯನ್ನು ಸಲ್ಲಿಸುವ ಸರದಿ ಜಕರೀಯನ ಪಾಲಿಗೆ ಬಂತು. 10ಅಂತೆಯೇ ಅವನು ಧೂಪಾರತಿಯನ್ನು ಅರ್ಪಿಸುತ್ತಿದ್ದ. ಜನಸಮೂಹವು ಹೊರಗೆ ನಿಂತು ಪ್ರಾರ್ಥಿಸುತ್ತಿತ್ತು.  11ಆಗ ಧೂಪವೇದಿಕೆಯ ಬಲಗಡೆಯಲ್ಲಿ ದೇವದೂತನು ಪ್ರತ್ಯಕ್ಷನಾದನು.  12ಜಕರೀಯನು  ಅವನನ್ನು  ನೋಡಿ  ತತ್ತರಗೊಂಡು  ಭಯಪೀಡಿತನಾದನು. 13ದೂತನು ಅವನಿಗೆ, “ಭಯಪಡಬೇಡ ಜಕರೀಯ; ನಿನ್ನ ಪ್ರಾರ್ಥನೆಯನ್ನು ದೇವರು ಆಲಿಸಿದ್ದಾನೆ. ನಿನ್ನ ಪತ್ನಿ ಎಲಿಜಬೇತಳು ನಿನಗಾಗಿ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ  ‘ಯೊವಾನ್ನ’ನೆಂದು  ಹೆಸರಿಡಬೇಕು. 14ಆ ಮಗುವಿನ ಜನನದಿಂದ ನಿನಗೆ  ಆನಂದವೂ, ಉಲ್ಲಾಸವೂ ಉಂಟಾಗುವದು; ಅವನ ಜನನದಿಂದ ಅನೇಕರು ಆನಂದಿಸುವರು.  15ದೇವರ ದೃಷ್ಟಿಯಲ್ಲಿ ಅವನು ಮಹಾತ್ಮನಾಗುವನು. ಅವನು  ದ್ರಾಕ್ಷಾರಸವನ್ನಾಗಲಿ,  ಮದ್ಯವನ್ನಾಗಲಿ  ಸೇವಿಸನು;  ತಾಯಿಯ  ಗರ್ಭದಿಂದಲೇ ಅವನು ಪರಿಶುದ್ಧಾತ್ಮಭರಿತನಾಗಿರುವನು. 16ಇಸ್ರಾಯೇಲಿರಲ್ಲಿ ಅನೇಕರನ್ನು ಅವನು ದೇವರ ಕಡೆಗೆ ತಿರುಗಿಸುವನು. 17ತಂದೆ-ಮಕ್ಕಳನ್ನು ಅವನು ಒಂದುಗೂಡಿಸುವನು. ಅವಿಧೇಯರನ್ನು ಸನ್ಮಾರ್ಗಕ್ಕೆ ತರುವನು. ಹೀಗೆ ಅವನು ಪ್ರಭುವಿಗೆ ಯೋಗ್ಯಪ್ರಜೆಗಳನ್ನು ಸಿದ್ಧಗೊಳಿಸುವನಲ್ಲದೇ ಎಲೀಯನಂತೆ ಶಕ್ತಿಪ್ರಭಾವಗಳಿಂದೊಡಗೂಡಿ ಪ್ರಭುವಿನ ಮುಂದೂತನಾಗುವನು” ಎಂದನು. 18ಆಗ  ಜಕರೀಯನು  ಆ ದೂತನಿಗೆ, “ಈ ಮಾತು ನಿಜವಾಗುವುದೆಂದು ನಾನು ಹೇಗೆ ತಿಳಿದುಕೊಳ್ಳಲಿ? ನಾನು ಮುದುಕ; ನನ್ನ ಪತ್ನಿಗೂ ಮುಪ್ಪು,” ಎಂದನು. 19ಆ ಮಾತಿಗೆ ದೂತನು ಪ್ರತ್ಯುತ್ತರವಾಗಿ, “ನಾನು ದೇವರ ಸೇವೆಗೈಯುವ ಗಬ್ರಿಯೇಲನು; ಈ ಶುಭಸಮಾಚಾರವನ್ನು ನಿನಗೆ ತಿಳಿಸುವುದಕ್ಕಾಗಿ ದೇವರ ಆಜ್ಞೆಯಂತೆ ಬಂದವನು. 20ನಾನು ತಿಳಿಸಿದ ಸಂದೇಶವು ಸಕಾಲದಲ್ಲಿ ನೆರವೇರುವುದು. ಆದರೆ ನೀನದನ್ನು ನಂಬದೆ ಹೋದ ಕಾರಣ, ಅದೆಲ್ಲಾ ನೆರವೇರುವ ತನಕ ನೀನು ಮಾತನಾಡಲಾರದೇ ಮೂಕನಾಗಿರುವೆ,” ಎಂದನು.

21ಇತ್ತ ಭಕ್ತ ಜನರು ಜಕರೀಯನಿಗಾಗಿ ಎದುರು ನೋಡುತ್ತಾ, ದೇವಾಲಯದಲ್ಲಿ ಅವನು ಇಷ್ಟು ತಡಮಾಡಲು ಕಾರಣವೇನಿರಬಹುದೆಂದು ಆಶ್ಚರ್ಯಪಟ್ಟರು. 22ಅವನು ಹೊರಗೆ ಬಂದಾಗ ನೆರೆದಿದ್ದ ಜನಸಮೂಹದೊಂದಿಗೆ ಮಾತನಾಡಲಾರದೆ ಹೋದನು; ಅವನು ಮಾತನಾಡಲಾಗದೇ ಬರಿಯ ಸನ್ನೆಗಳನ್ನು ಮಾಡುತ್ತಿದ್ದನು. ಅದನ್ನು ನೋಡಿದ ಅವರು ಅವನು  ದೇವಾಲಯದಲ್ಲಿ  ಒಂದು  ದಿವ್ಯದರ್ಶನವನ್ನು  ಕಂಡಿರಬಹುದೆಂದು  ಗ್ರಹಿಸಿದರು. 23ತನ್ನ  ಯಾಜಕಸೇವೆಯ  ಅವಧಿಯು  ಮುಗಿದ  ಕೂಡಲೆ  ಜಕರೀಯನು ತನ್ನ ಮನೆಗೆ ಹೋದನು. 24ಕೆಲವು ದಿನಗಳ ಬಳಿಕ ಅವನ ಹೆಂಡತಿಯಾದ ಎಲಿಜಬೇತಳು ಗರ್ಭಿಣಿಯಾಗಿ ಐದು ತಿಂಗಳು ಮನೆಯಲ್ಲಿಯೇ ಇದ್ದಳು. 25 ”ಜನರ ನಡುವೆ ನನಗಿದ್ದ ಅವಮಾನವನ್ನು  ತೊಲಗಿಸುವುದಕ್ಕಾಗಿ  ಕೊನೆಗೂ  ಸರ್ವೇಶ್ವರನು  ನನ್ನ ಮೇಲೆ ಕರುಣೆ ತೋರಿದ್ದಾರೆ.” ಎಂದು ಆಕೆಯು ಹೇಳಿಕೊಂಡಳು.

ಕ್ರಿಸ್ತ ಜನನದ ಮುನ್ಸೂಚನೆ

26ಎಲಿಜಬೇತಳು ಗರ್ಭಿಣಿಯಾದ ಆರನೆಯ ತಿಂಗಳಿನಲ್ಲಿ ಗಲಿಲೇಯ ಪ್ರಾಂತ್ಯದ ನಜರೇತೆಂಬ ಊರಿನಲ್ಲಿದ್ದ ಒಬ್ಬ ಕನ್ನಿಕೆಯ ಬಳಿ ‘ಗಬ್ರಿಯೇಲ್‌’ ಎನ್ನುವ ದೇವದೂತನು ಕಾಣಿಸಿಕೊಂಡನು. 27ಆಕೆಯ ಹೆಸರು ‘ಮರಿಯ’; ದಾವೀದನ ವಂಶಜನಾದ ಜೋಸೆಫನಿಗೆ ಆಕೆಯೊಂದಿಗೆ ವಿವಾಹ ನಿಶ್ಚಯವಾಗಿತ್ತು. 28ಆಕೆಯ ಬಳಿ ದೇವದೂತನು, “ದೈವಾನುಗ್ರಹಭರಿತಳೇ, ನಿನಗೆ ಶುಭವಾಗಲಿ; ಸರ್ವೇಶ್ವರನು ನಿನ್ನೊಂದಿಗಿದ್ದಾನೆ;  ಸ್ತ್ರೀಯರಲ್ಲಿ  ನೀನು  ಧನ್ಯಳು,”  ಎಂದು  ಹೇಳಿದನು.  29ದೇವದೂತನನ್ನು ಕಂಡು ಗಾಬರಿಯಾದ ಮರಿಯಳು, ‘ಇದೆಂಥಾ ಶುಭಾಶಯ’ ಎಂದು ತಬ್ಬಿಬ್ಬಾದಳು. 30ಆಗ ದೂತನು ಆಕೆಗೆ, “ಮರಿಯಾ, ನೀನು ಅಂಜಬೇಕಾಗಿಲ್ಲ; ದೇವರ ಅನುಗ್ರಹ ನಿನಗೆ ಲಭಿಸಿದೆ.  31ಇದೋ,  ನೀನು  ಗರ್ಭವತಿಯಾಗಿ  ಒಬ್ಬ  ಮಗನನ್ನು  ಪಡೆಯುವೆ;  ಆತನಿಗೆ ‘ಯೇಸು’ ಎಂದು ಹೆಸರಿಡಬೇಕು. 32-33ಆತನು ಮಹಾಪುರುಷನಾಗುವನು; ಪರಾತ್ಪರ ದೇವರ  ಕುವರನೆನಿಸಿಕೊಳ್ಳುವನು; ಪಿತಾಮಹ ಯಕೋಬನ ಮತ್ತು ದಾವೀದನ ವಂಶವನ್ನು ಚಿರಕಾಲ ಆಳುವನು. ಆತನ ರಾಜ್ಯಭಾರಕ್ಕೆ ಅಂತ್ಯವೇ ಇರದು,” ಎಂದನು.
34ಅದಕ್ಕೆ ಮರಿಯಳು, “ಇದು ಹೇಗಾದೀತು? ನಾನು ಪುರುಷನನ್ನು ಅರಿತವಳಲ್ಲವಲ್ಲಾ?” ಎಂದು ಕೇಳಿದಳು.  35ಅದಕ್ಕೆ  ದೂತನು  ಪ್ರತ್ಯುತ್ತರವಾಗಿ, “ಪವಿತ್ರಾತ್ಮವು  ನಿನ್ನ ಮೇಲೆ ಬರುವುದು, ಮಹೋನ್ನತ ದೇವರ ಶಕ್ತಿಯು ನಿನ್ನನ್ನು ಆವರಿಸಿ ಕೊಳ್ಳುವುದು; ಈ ಕಾರಣದಿಂದ ನಿನ್ನಲ್ಲಿ  ಹುಟ್ಟುವ  ಆ  ಪವಿತ್ರವಾದ  ಶಿಶುವು  ‘ದೇವರ ಪುತ್ರ’ನೆನಿಸಿಕೊಳ್ಳವನು. 36ನಿನ್ನ ಸಂಬಂಧಿಯಾದ ಎಲಿಜಬೇತಳು ಸಹ ತನ್ನ ಮುಪ್ಪಿನ ಪ್ರಾಯದಲ್ಲಿ ಮಗನನ್ನು  ಗರ್ಭಧರಿಸಿದ್ದಾಳೆ.  ಆಕೆಗೆ  ಇದು  ಆರನೆಯ ತಿಂಗಳು. 37ದೇವರಿಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, “ ಎಂದು ಮರಿಯಳಿಗೆ ಹೇಳಿದನು. 38ಆಗ ಮರಿಯಳು, “ಇದೋ,  ನಾನು  ದೇವರದಾಸಿ;  ನಿಮ್ಮ ಮಾತಿನಂತೆ  ನನಗಾಗಲಿ,”  ಎಂದಳು. ದೇವದೂತನು ಆಕೆಯನ್ನು ಬೀಳ್ಕೊಟ್ಟು ಅದೃಶ್ಯನಾದನು.

ಮರಿಯ-ಎಲಿಜಬೇತಳ ಭೇಟಿ

39ಇದಾದ ಕೆಲವು ದಿನಗಳಲ್ಲಿ ಮರಿಯಳು ಪ್ರಯಾಣಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಪಟ್ಟಣಕ್ಕೆ ತ್ವರೆಯಾಗಿ ಬಂದಳು. 40ಅಲ್ಲಿ ಜಕರೀಯನ ಮನೆಯನ್ನು ಪ್ರವೇಶಿಸಿ ಎಲಿಜಬೇತಳನ್ನು ವಂದಿಸಿದಳು. 41ಎಲಿಜಬೇತಳು ಮರಿಯಳ ವಂದನೆಯನ್ನು ಸ್ವೀಕರಿಸಿದ್ದೇ ತಡ  ಅವಳ  ಗರ್ಭದಲ್ಲಿದ್ದ ಶಿಶು ನಲಿದಾಡಿತು.
ಎಲಿಜಬೇತಳು ಪರಿಶುದ್ಧಾತ್ಮಭರಿತಳಾಗಿ: 42ಹರ್ಷೋದ್ಗಾರದಿಂದ;

“ಸ್ತ್ರೀಯರೊಳು ನೀ ಧನ್ಯಳು;
ನಿನ್ನ ಕರುಳ ಕುಡಿಯೂ ಧನ್ಯ!
43ಎನ್ನ ಪ್ರಭುವಿನ ಮಾತೆ ನೀನು;
ನೀನೆನ್ನ ಬಳಿ ಬಂದುದೆಂತಹಾ ಭಾಗ್ಯ!
44ನಿನ್ನ ವಂದನೆಯ ದನಿಯೆನ್ನ ಕಿವಿತಕಿದೊಡನೆ
ನಲಿದಾಡಿತು ಆನಂದದಿಂದೆನ್ನ ಕರುಳಕುಡಿ
ನಂಬಿ ಧನ್ಯಳಾಗಿಹೆ ನೀ ದೇವರ
ಸಂದೇಶವು ನೆರವೇರುವುದೆಂದು.”

 ಎಂದು ನುಡಿದಳು.                                                                                                                                                                                                                                                                                                             
ಮರಿಯಳ ಸ್ತುತಿಗೀತೆ

46ಆಗ ಮರಿಯಳು ಈ ಸ್ತುತಿಗೀತೆಯನು ಹಾಡಿದಳು;
ಮಾಡುತಿದೆ ಎನ್ನಾತ್ಮ ಸರ್ವೇಶ್ವರರ ಸ್ತುತಿಯನ್ನು,
47ಆನಂದಿಸುತ್ತಿದೆ ಎನ್ನ ಮನ ದೇವನ ನೆನೆನೆನೆದು.
48ಕಟಾಕ್ಷಿಸಿಹರು ತಮ್ಮ ದಾಸಿಯ ದೀನ ಸ್ಥಿತಿಯ ಕಂಡು,
ಹೊಗಳುವರೆನ್ನ ಧನ್ಯಳೆಂದು ತಲತಲಾಂತರಕ್ಕೂ.
49ಮಹಾತ್ಕಾರ್ಯಗಳ ಮಾಡಿಹರೆಮಗೆ ಸರ್ವಶಕ್ತರು,
ಪರಮ ಪವಿತ್ರವಾಗಿಹುದು ಅವರ ನಾಮಧೇಯವು.
50ತೋರುವರವರು ಕರುಣೆಯನು ವಂಶವಂಶಕ್ಕೂ,
ಭಯಭಕುತಿಯಲಿ ಜೀವಿಸುವವನಿಗದು ನಿಶ್ಚಿತವು.

51ತನ್‌ ಭಾಹುಬಲವನವರು ತೋರಿಸಿಹರು,
ಅಹಂಕಾರಿ ಹೃದಯಗಳನವರು ಚದುರಿಸಿಹರು.
52ಘನಾಧಿಪತಿಗಳನು ಸಿಂಹಾಸನದಿಂ ತಳ್ಳಿಹರು,
ದೀನದಲಿತರನವರು ಉನ್ನತ ಸ್ಥಿತಿಗೇರಿಸಿಹರು.
53ಸಿರಿವಂತರನು ಬರಿಗೈಯಲ್ಲಿ ಕಳುಹಿಸಿಹರು,
ತೃಪ್ತಿಪಡಿಸುತಲಿ ಹಸಿದವನನು ಮೃಷ್ಟಾನ್ನದಿ.
54- 55ನೆನವರವರು ಪೂರ್ವಜರಿಗಿತ್ತ ವಾಗ್ದಾನವನು,
 ಅಬ್ರಹಾಮನ ವಂಶಕೆ ತೋರುತ ಕರುಣೆಯನು.

56ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳ ಜೊತೆ ತಂಗಿದ್ದು ಅನಂತರ ತನ್ನ ಮನೆಗೆ ಹಿಂದಿರುಗಿದಳು.

ಸ್ನಾನಿಕ ಯೊವಾನ್ನನ ಜನನ

57ದಿನ ತುಂಬಿದಾಗ ಎಲಿಜಬೇತಳು ಓರ್ವ ಮಗನನ್ನು ಹೆತ್ತಳು. 58ಸರ್ವೇಶ್ವರನು ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಅರಿತ ನೆರೆಹೊರೆಯವರೂ ಮತ್ತು ಬಂಧುಗಳೂ ಆಕೆಯ ಜೊತೆ ಸೇರಿ ಸಂತೋಷ ಪಟ್ಟರು. 59ಬಳಿಕ ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡುವುದಕ್ಕಾಗಿ ಅವರೆಲ್ಲರೂ ಬಂದು ಮಗುವಿನ ತಂದೆಯ ಹೆಸರಿನಂತೆ ಜಕರೀಯನೆಂದು ಕರೆದರು. 60ಆದರೆ ಮಗುವಿನ ತಾಯಿಯು, “ಇಲ್ಲ, ಅದು ಕೂಡದು, ಅವನಿಗೆ ‘ಯೊವಾನ್ನ’ ಎಂಬ ಹೆಸರಿಡಬೇಕು,” ಎಂದಳು.  61ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ  ಈ  ಹೆಸರು ಇಲ್ಲವಲ್ಲ,”ಎಂದುಹೇಳಿ,62ಅವನನ್ನು ಯಾವ ಹೆಸರಿನಿಂದ ಕರೆಯಬೇಕೆಂದು ಮಗುವಿನ ತಂದೆಗೆ ಸನ್ನೆ ಮಾಡಿ ಕೇಳಿದರು. 63ಆಗ ಜಕರಿಯನು ಬರೆಯುವ ಹಲಗೆಯೊಂದನ್ನು ಕೇಳಿ ಪಡೆದು ಅದರ ಮೇಲೆ ‘ಯೊವಾನ್ನ’ ಎಂದು ಬರೆದನು. ಆಗ ಅಲ್ಲಿದ್ದವರೆಲ್ಲರೂ ಆಶ್ಚರ್ಯಪಟ್ಟರು. 64ಆ ಕ್ಷಣವೇ ಅವನಿಗೆ ಬಾಯಿ ಬಂತು. ಅವನ ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು. 65ಈ ವಿಷಯವು ಜುದೇಯದ ಗುಡ್ಡಗಾಡು ಪ್ರಾಂತದಲ್ಲೆಲ್ಲಾ ಹರಡಿತು. 66ಕೇಳಿದವರೆಲ್ಲರೂ ಈ ವಿಷಯಗಳನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು, ‘ಈ ಮಗು ಮುಂದೆ ಎಂಥವನಾಗುವನೋ!’ ಎಂದು ಎಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಹಸ್ತವು ಆ ಮಗುವಿನ ಮೇಲಿತ್ತು.

ಜಕರೀಯನ ಪ್ರವಾದನೆ

67ಆಗ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು;
68ಸ್ತುತಿಸ್ತೋತ್ರವು ಇಸ್ರಯೇಲಿನ ಸರ್ವೇಶ ದೇವರಿಗೆ,
ಸ್ವಂತ ಪ್ರಜೆಯನು ಸಂಧಿಸಿ ಉದ್ಧರಿಸಿದಾತನಿಗೆ.
69ವೀರ ಉದ್ಧಾರಕನನು ಉದಯಗೊಳಿಸಿಹನು,
ಎಮಗಾಗಿ ತನ್ನ ದಾಸ ದಾವೀದನ ಮನೆತನದಲ್ಲಿ.
70-71ಪುರಾತನ ಕಾಲದಿಂದ ಪ್ರವಾದಿಗಳಿಂದ ಅರುಹಿಹನು,
ಶತ್ರು-ದ್ವೇಷಿಗಳಿಂದ ರಕ್ಷಣೆಯ ಅನುಗ್ರಹಿಸುವನೆಂದು.
72ತೋರಿಹನು ಪೂರ್ವಜರಿಗಿತ್ತ ವಾಗ್ದತ್ತ ಕರುಣೆಯನು,
ಸ್ಮರಿಸುತಲಿ ತನ್‌ ಪವಿತ್ರ ಒಡಂಬಡಿಕೆಯನು.
73ಅಬ್ರಹಾಮ ಪಿತಾಮಹನಿಗಿತ್ತ ವಾಗ್ದಾನದಂತೆ,
74ಅಭಯವಿತ್ತನು ಶತೃಗಳಿಂದೆಮ್ಮನು ರಕ್ಷಿಸುವಂತೆ.
75ನಿರ್ಭಯರಾಗಿ ಜೀವನಾದ್ಯಂತ ದೇವಸೇವೆ ಮಾಡುವಂತೆ,
ಸದ್ಭಕ್ತರಾಗಿ, ಪುನೀತರಾಗಿ ದೇವಸನ್ನಿಧಿಯಲ್ಲಿ ಬಾಳುವಂತೆ.
76ಮಗುವೇ, ನೀನಾಗುವೆ ಪರಾತ್ಪರನ ಪ್ರವಾದಿಯು,
ತೆರಳುವೆ ಈಶನ ಮಾರ್ಗವ ಮುನ್‌ಸಿದ್ಧಗೊಳಿಸಲು.
77ಸಾರುವೆ ಪಾಪಕ್ಷಮೆಯನು ನೀನಾತನ ಜನರಿಗೆ,
78ಆಗಿಹನೆಮ್ಮ ದೇವನು ಕೃಪಾವಂತ ಕರುಣಾಳುವು
ಮೂಡಿಸುತಲಿ ಅರಣೋದಯದಿ ಉದ್ಧಾರಕ ರವಿಯನು.
79ಇರುಳಿನಲೂ ಮರಣದಮುಸುಕಿನಲೂ ಇರುವವಗೆ
                                         ತೋರುವನು ಬೆಳಕನು ನಡೆಸಲು ಶಾಂತಿಪಥದಲೆಮ್ಮನು.                                      
80ಆ ಬಾಲಕನು ಬೆಳೆದು ಶಕ್ತಿವಂತನಾದನು. ಇಸ್ರಯೇಲ್‌ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು.

ಕ್ರಿಸ್ತೇಸುವಿನ ಜನನ

1ಆ ಕಾಲದಲ್ಲಿ ಚಕ್ರವರ್ತಿ ಅಗಸ್ತುಸನು ತನ್ನ ಸಾಮ್ರಾಜ್ಯದಲ್ಲೆಲ್ಲಾ ಜನಗಣತಿಯಾಗಬೇಕೆಂದು ಆಜ್ಞೆ ಹೊರಡಿಸಿದನು. 2ಮೊಟ್ಟಮೊದಲ ಆ ಜನಗಣತಿ, ಕುರೇನ್ಯನು ಸಿರಿಯಾ ನಾಡಿಗೆ ಅಧಿಪತಿಯಾಗಿದ್ದಾಗ ನಡೆಯಿತು. 3ಆಗ ಎಲ್ಲರೂ ಜನಗಣತಿಗಾಗಿ ತಮ್ಮ ಹೆಸರುಗಳನ್ನು ದಾಖಲೆ ಮಾಡಿಸಲು ತಮ್ಮ ತಮ್ಮ ಊರುಗಳಿಗೆ ಹೊರಟರು.
4ಜೋಸೇಫನು ದಾವೀದನ ಮನೆತನ ಹಾಗೂ ಗೋತ್ರದ ಜುದೇಯ ನಾಡಿನ ಬೆತ್ಲೆಹೆಮ್‌ ಎಂಬ ದಾವೀದನ ಊರಿಗೆ ಹೋದನು. 

5ಆತನ ಸಂಗಡ ಆತನಿಗೆ ನಿಶ್ಚಿತಾರ್ಥಳಾಗಿದ್ದ ಹಾಗೂ ಪೂರ್ಣ ಗರ್ಭಿಣಿಯಾಗಿದ್ದ ಮರಿಯಳು ಸಹ ಹೋದಳು. 6ಹೀಗೆ ಅವರು ಬೆತ್ಲೆಹೆಮ್‌ನಲ್ಲಿದ್ದಾಗ, ಮರಿಯಳಿಗೆ ಪ್ರಸವ ಕಾಲ ಸಮೀಪಿಸಿತು. 7ಆಕೆಯು ಚೊಚ್ಚಲು ಮಗುವಿಗೆ ಜನ್ಮವಿತ್ತಳು. ಇದ್ದ ಬಟ್ಟೆಯಲ್ಲೇ ಸುತ್ತಿ ಆ ಮಗುವನ್ನು ಗೋದಲಿಯಲ್ಲಿ ಮಲಗಿಸಿದಳು-ಕಾರಣ ಅವರಿಗೆ ಛತ್ರದಲ್ಲಿ ಸ್ಥಳ ಸಿಕ್ಕಿರಲಿಲ್ಲ.


ದೇವದೂತರು ಕುರುಬರಿಗೆ ತಂದ ಸಂದೇಶ

8ಅದೇ ನಾಡಿನಲ್ಲಿ ಕುರುಬರು ಹೊಲಗಳಲ್ಲಿದ್ದುಕೊಂಡು ರಾತ್ರಿಯಲ್ಲಿ ಕುರಿಮಂದೆಯನ್ನು ಕಾಯುತ್ತಿದ್ದರು. 9ಇದ್ದಕ್ಕಿದ್ದಂತೆ ದೇವದೂತರು ಅವರೆದುರಿಗೆ ಪ್ರತ್ಯಕ್ಷರಾಗಲು ಸವ್ವೇಶ್ವರನ ಪ್ರಭೆಯು ಅವರ ಸುತ್ತಲೂ ಪ್ರಕಾಶಿಸಿತು. ಅವರು ಬಹಳವಾಗಿ ಹೆದರಿದರು. 10ಆ ದೂತನು ಅವರಿಗೆ, “ಹೆದರಬೇಡಿರಿ; ಇದೋ ಜನರಿಗೆಲ್ಲಾ ಪರಮಾನಂದವನ್ನುಂಟು ಮಾಡುವ ಶುಭಸಂದೇಸವನ್ನು ನಿಮಗೆ ತಿಳಿಸುತ್ತೇನೆ. 11ಅದೇನೆಂದರೆ, ಇಂದೇ ದಾವೀದನ ಊರಿನಲ್ಲಿ ನಿಮಗೋಸ್ಕರ ಜಗದೋದ್ಧಾರಕ ಜನಿಸಿದ್ದಾನೆ. ಅವರೇ ಪ್ರಭು ಕ್ರಿಸ್ತ. 12ಇದೋ, ನಿಮಗೊಂದು ಸೂಚನೆ; ಆ ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಗೋದಲಿಯಲ್ಲಿ ಮಲಗಿಸಿರುವುದನ್ನು ನೀವು ಕಾಣುವಿರಿ,” ಎಂದನು.
13ತಕ್ಷಣವೇ ಆ ದೂತನ ಸಂಗಡ ಸ್ವರ್ಗಲೋಕದ ದೂತಪರಿವಾರವು ಕಾಣಿಸಿಕೊಂಡಿತು. 14ಮಹೋನ್ನತದಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮಾನವರಿಗೆ ಶಾಂತಿ ಸಮಾಧಾನ,” ಎಂದು ಸರ್ವೇಶ್ವರನ ಸ್ತುತಿ ಮಾಡಿತು,
15ದೇವದೂತರು ಸ್ವರ್ಗಕ್ಕೆ ಹಿಂದಿರುಗಿದ ಮೇಲೆ ಕುರುಬರು, “ಬನ್ನಿ, ಸರ್ವೇಶ್ವರ ನಮಗೆ ತಿಳಿಸಿದ ಘಟನೆಯನ್ನು ತಿಳಿಯಲು ಈಗಲೇ ಬೆತ್ಲೆಹೆಮ್‌ಗೆ ಹೋಗೋಣ. ಎಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು. 16ಅವರು ಅಲ್ಲಿಂದ ತ್ವರೆಯಾಗಿ ಹೋಗಿ, ಮರಿಯಳನ್ನೂ ಜೋಸೇಫನನ್ನೂ ಗೋದಲಿಯಲ್ಲಿ ಮಲಗಿದ್ದ ಶಿಶುವನ್ನೂ ಕಂಡರು. 17ಆ ಮಗುವಿನ ವಿಷಯವಾಗಿ ದೂತನು ತಮಗೆ ಹೇಳಿದ್ದನ್ನೆಲ್ಲಾ ಅವರಿಗೆ ತಿಳಿಸಿದರು. 18ಕುರುಬರು ಹೇಳಿದ ವಿಷಯಗಳನ್ನು ಅವರು ಆಶ್ಚರ್ಯಪಟ್ಟರು. 19ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಮನಸ್ಸಿನಲ್ಲಿಯೇ ಇಟ್ಟುಕೊಂಡು ಆಲೋಚಿಸುತ್ತಿದ್ದಳು. 20ಇತ್ತ ಕುರುಬರು ತಾವು ಕಂಡಿದ್ದನ್ನೂ ಕೇಳಿದ್ದನ್ನೂ ನೆನೆಯುತ್ತಾ, ದೇವರ ಮಹಿಮೆಯನ್ನು ಸಾರುತ್ತಾ, ಮಹಿಮೆಪಡಿಸುತ್ತಾ ಹಿಂದಿರುಗಿದರು. ದೇವದೂತನು ಅವರಿಗೆ ತಿಳಿಸಿದಂತೆ ಎಲ್ಲವೂ ಸಂಭವಿಸಿತ್ತು

                                                                         ಮರಿಯಳ ಸ್ತುತಿಗೀತೆ

46ಆಗ ಮರಿಯಳು ಈ ಸ್ತುತಿಗೀತೆಯನು ಹಾಡಿದಳು;
ಮಾಡುತಿದೆ ಎನ್ನಾತ್ಮ ಸರ್ವೇಶ್ವರರ ಸ್ತುತಿಯನ್ನು,
47ಆನಂದಿಸುತ್ತಿದೆ ಎನ್ನ ಮನ ದೇವನ ನೆನೆನೆನೆದು.
48ಕಟಾಕ್ಷಿಸಿಹರು ತಮ್ಮ ದಾಸಿಯ ದೀನ ಸ್ಥಿತಿಯ ಕಂಡು,
ಹೊಗಳುವರೆನ್ನ ಧನ್ಯಳೆಂದು ತಲತಲಾಂತರಕ್ಕೂ.
49ಮಹಾತ್ಕಾರ್ಯಗಳ ಮಾಡಿಹರೆಮಗೆ ಸರ್ವಶಕ್ತರು,
ಪರಮ ಪವಿತ್ರವಾಗಿಹುದು ಅವರ ನಾಮಧೇಯವು.
50ತೋರುವರವರು ಕರುಣೆಯನು ವಂಶವಂಶಕ್ಕೂ,
ಭಯಭಕುತಿಯಲಿ ಜೀವಿಸುವವನಿಗದು ನಿಶ್ಚಿತವು.

51ತಮ್ಮ ಭಾಹುಬಲವನವರು ತೋರಿಸಿಹರು,
ಅಹಂಕಾರಿ ಹೃದಯಗಳನವರು ಚದುರಿಸಿಹರು.
52ಘನಾಧಿಪತಿಗಳನು ಸಿಂಹಾಸನದಿಂ ತಳ್ಳಿಹರು,
ದೀನದಲಿತರನವರು ಉನ್ನತ ಸ್ಥಿತಿಗೇರಿಸಿಹರು.
53ಸಿರಿವಂತರನು ಬರಿಗೈಯಲ್ಲಿ ಕಳುಹಿಸಿಹರು,
ತೃಪ್ತಿಪಡಿಸುತಲಿ ಹಸಿದವನನು ಮೃಷ್ಟಾನ್ನದಿ.
54- 55ನೆನವರವರು ಪೂರ್ವಜರಿಗಿತ್ತ ವಾಗ್ದಾನವನು,
ಅಬ್ರಹಾಮನ ವಂಶಕೆ ತೋರುತ ಕರುಣೆಯನು.

56ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳ ಜೊತೆ ತಂಗಿದ್ದು ಅನಂತರ ತನ್ನ ಮನೆಗೆ ಹಿಂದಿರುಗಿದಳು.

ಸ್ನಾನಿಕ ಯೊವಾನ್ನನ ಜನನ

57ದಿನ ತುಂಬಿದಾಗ ಎಲಿಜಬೇತಳು ಓರ್ವ ಮಗನನ್ನು ಹೆತ್ತಳು. 58ಸರ್ವೇಶ್ವರನು ಮಹಾಕರುಣೆಯನ್ನು ಆಕೆಯ ಮೇಲೆ ತೋರಿಸಿದ್ದನ್ನು ಅರಿತ ನೆರೆಹೊರೆಯವರೂ ಮತ್ತು ಬಂಧುಗಳೂ ಆಕೆಯ ಜೊತೆ ಸೇರಿ ಸಂತೋಷ ಪಟ್ಟರು. 59ಬಳಿಕ ಎಂಟನೆಯ ದಿನ ಆ ಮಗುವಿಗೆ ಸುನ್ನತಿ ಮಾಡುವುದಕ್ಕಾಗಿ ಅವರೆಲ್ಲರೂ ಬಂದು ಮಗುವಿನ ತಂದೆಯ ಹೆಸರಿನಂತೆ ಜಕರೀಯನೆಂದು ಕರೆದರು. 60ಆದರೆ ಮಗುವಿನ ತಾಯಿಯು, “ಇಲ್ಲ, ಅದು ಕೂಡದು, ಅವನಿಗೆ ‘ಯೊವಾನ್ನ’ ಎಂಬ ಹೆಸರಿಡಬೇಕು,” ಎಂದಳು. 61ಅದಕ್ಕೆ ಅವರು, “ನಿನ್ನ ಬಂಧುಬಳಗದವರಲ್ಲಿ ಈ ಹೆಸರು ಇಲ್ಲವಲ್ಲ,” ಎಂದು ಹೇಳಿ, 62ಅವನನ್ನು ಯಾವ ಹೆಸರಿನಿಂದ ಕರೆಯಬೇಕೆಂದು ಮಗುವಿನ ತಂದೆಗೆ ಸನ್ನೆ ಮಾಡಿ ಕೇಳಿದರು. 63ಆಗ ಜಕರಿಯನು ಬರೆಯುವ ಹಲಗೆಯೊಂದನ್ನು ಕೇಳಿ ಪಡೆದು ಅದರ ಮೇಲೆ ‘ಯೊವಾನ್ನ’ ಎಂದು ಬರೆದನು. ಆಗ ಅಲ್ಲಿದ್ದವರೆಲ್ಲರೂ ಆಶ್ಚರ್ಯಪಟ್ಟರು. 64ಆ ಕ್ಷಣವೇ ಅವನಿಗೆ ಬಾಯಿ ಬಂತು. ಅವನ ನಾಲಿಗೆ ಸಡಿಲವಾಯಿತು; ಅವನು ಮಾತನಾಡಲು ಆರಂಭಿಸಿ ದೇವರನ್ನು ಸ್ತುತಿಸಿದನು. 65ಈ ವಿಷಯವು ಜುದೇಯದ ಗುಡ್ಡಗಾಡು ಪ್ರಾಂತದಲ್ಲೆಲ್ಲಾ ಹರಡಿತು. 66ಕೇಳಿದವರೆಲ್ಲರೂ ಈ ವಿಷಯಗಳನ್ನು ತಮ್ಮ ಮನಸ್ಸಿನಲ್ಲಿ ಇಟ್ಟುಕೊಂಡು, ‘ಈ ಮಗು ಮುಂದೆ ಎಂಥವನಾಗುವನೋ!’ ಎಂದು ಅಂದುಕೊಂಡರು. ನಿಶ್ಚಯವಾಗಿಯೂ ಸರ್ವೇಶ್ವರನ ಹಸ್ತವು ಆ ಮಗುವಿನ ಮೇಲಿತ್ತು.

ಜಕರೀಯನ ಪ್ರವಾದನೆ

67ಆಗ ಮಗುವಿನ ತಂದೆಯಾದ ಜಕರೀಯನು ಪವಿತ್ರಾತ್ಮಭರಿತನಾಗಿ ಹೀಗೆಂದು ಪ್ರವಾದಿಸಿದನು;
68ಸ್ತುತಿಸ್ತೋತ್ರವು ಇಸ್ರಯೇಲಿನ ಸರ್ವೇಶ ದೇವರಿಗೆ,
ಸ್ವಂತ ಪ್ರಜೆಯನು ಸಂಧಿಸಿ ಉದ್ಧರಿಸಿದಾತನಿಗೆ.
69ವೀರ ಉದ್ಧಾರಕನನು ಉದಯಗೊಳಿಸಿಹನು,
ಎಮಗಾಗಿ ತನ್ನ ದಾಸ ದಾವೀದನ ಮನೆತನದಲ್ಲಿ.
70-71ಪುರಾತನ ಕಾಲದಿಂದ ಪ್ರವಾದಿಗಳಿಂದ ಅರುಹಿಹನು,
ಶತ್ರು-ದ್ವೇಷಿಗಳಿಂದ ರಕ್ಷಣೆಯ ಅನುಗ್ರಹಿಸುವನೆಂದು.
72ತೋರಿಹನು ಪೂರ್ವಜರಿಗಿತ್ತ ವಾಗ್ದತ್ತ ಕರುಣೆಯನು,
ಸ್ಮರಿಸುತಲಿ ತಮ್ಮ ಪವಿತ್ರ ಒಡಂಬಡಿಕೆಯನು.
73ಅಬ್ರಹಾಮ ಪಿತಾಮಹನಿಗಿತ್ತ ವಾಗ್ದಾನದಂತೆ,
74ಅಭಯವಿತ್ತನು ಶತೃಗಳಿಂದೆಮ್ಮನು ರಕ್ಷಿಸುವಂತೆ.
75ನಿರ್ಭಯರಾಗಿ ಜೀವನಾದ್ಯಂತ ದೇವಸೇವೆ ಮಾಡುವಂತೆ,
ಸದ್ಭಕ್ತರಾಗಿ, ಪುನೀತರಾಗಿ ದೇವಸನ್ನಿಧಿಯಲ್ಲಿ ಬಾಳುವಂತೆ.
76ಮಗುವೇ, ನೀನಾಗುವೆ ಪರಾತ್ಪರನ ಪ್ರವಾದಿಯು,
ತೆರಳುವೆ ಈಶನ ಮಾರ್ಗವ ಮುನ್‌ಸಿದ್ಧಗೊಳಿಸಲು.
77ಸಾರುವೆ ಪಾಪಕ್ಷಮೆಯನು ನೀನಾತನ ಜನರಿಗೆ,
78ಆಗಿಹನೆಮ್ಮ ದೇವನು ಕೃಪಾವಂತ ಕರುಣಾಳುವು
ಮೂಡಿಸುತಲಿ ಅರಣೋದಯದಿ ಉದ್ಧಾರಕ ರವಿಯನು.
79ಇರುಳಿನಲೂ ಮರಣದ ಮುಸುಕಿನಲೂ ಇರುವವಗೆ
ತೋರುವನು ಬೆಳಕ ನಡೆಸಲು ಶಾಂತಿಪಥದಲೆಮ್ಮನು.

80 ಆ ಬಾಲಕನು ಬೆಳೆದು ಶಕ್ತಿವಂತನಾದನು. ಇಸ್ರಯೇಲ್‌ ಜನರಿಗೆ ಬಹಿರಂಗವಾಗಿ ಕಾಣಿಸಿಕೊಳ್ಳುವವರೆಗೂ ಅವನು ಬೆಂಗಾಡಿನಲ್ಲೇ ವಾಸಿಸುತ್ತಿದ್ದನು.


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ